ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.
ಕನಸು
1.
ಕಂಡ ಕನಸು
ಬದುಕು ರೂಪಿಸುವ
ಹಚ್ಚಿಟ್ಟ ದೀಪ.
2.
ಎಲ್ಲ ಕನಸು
ಬಯಲು ಆಲಯದ
ಬೆಳಕ ಸಿರಿ.
3.
ಕನಸಾದರೂ
ನೆನಪಿನ ಬುತ್ತಿಯ
ಸವಿ ಮೆಲಕು.
-ಡಾ.ಖಾಡೆ
*
ಬೆಳಕು.
1.
ಬದುಕಿನಲ್ಲಿ
ಬೆಳಕ ತಂದವರು
ಲೋಕ ಗೆದ್ದರು.
2.
ಬೆಳಕಿನದೇ
ಬಯಲಿನ ರೂಪದ
ಸಿರಿವಂತಿಕೆ.
3.
ಮಣ್ಣು ಸೇರಿದ
ಬೀಜ ಮೊಳಕೆಯಿಂದ
ಬೆಳಕಾಯಿತು.
1.
ಬದುಕಿನಲ್ಲಿ
ಬೆಳಕ ತಂದವರು
ಲೋಕ ಗೆದ್ದರು.
2.
ಬೆಳಕಿನದೇ
ಬಯಲಿನ ರೂಪದ
ಸಿರಿವಂತಿಕೆ.
3.
ಮಣ್ಣು ಸೇರಿದ
ಬೀಜ ಮೊಳಕೆಯಿಂದ
ಬೆಳಕಾಯಿತು.
-ಡಾ.ಖಾಡೆ
*
ಕಾಲ
1.
ನಿಂತುಕೊಂಡರೂ
ಕಾಲಚಕ್ರ ಉರುಳಿ
ನಡೆಯುತ್ತದೆ.
2.
ಕಾಲ ಬಂದಾಗ
ಕಾಲಿಗೆ ಬುದ್ದಿಹೇಳಿ
ಜಾರಿಕೊಂಡರು.
3.
ದಾಖಲಾಗದೆ
ಹೇಳ ಹೆಸರಿಲ್ಲದೇ
ಹೋದೀತೆ ಕಾಲ.
-ಡಾ.ಖಾಡೆ
*
ಮಹಿಳೆ
1
ಹೆಣ್ಣು ಜನುಮ
ನಿರಂತರ ಜಗದ
ಫಲವಂತಿಕೆ.
2
ಎಲ್ಲ ಚೆಲುವು
ಭೂರಮೆ ಒಡಲಲ್ಲಿ
ತಾಯಿಯಾಯಿತು.
3
ಇಂದಷ್ಟೆ ಅಲ್ಲ
ಪ್ರತಿ ದಿನದಿನವೂ
ಮಹಿಳಾ ದಿನ.
-ಡಾ.ಖಾಡೆ
ಹೆಣ್ಣು ಜನುಮ
ನಿರಂತರ ಜಗದ
ಫಲವಂತಿಕೆ.
2
ಎಲ್ಲ ಚೆಲುವು
ಭೂರಮೆ ಒಡಲಲ್ಲಿ
ತಾಯಿಯಾಯಿತು.
3
ಇಂದಷ್ಟೆ ಅಲ್ಲ
ಪ್ರತಿ ದಿನದಿನವೂ
ಮಹಿಳಾ ದಿನ.
-ಡಾ.ಖಾಡೆ
*
ಹಾಯ್ಕು..
1.
ನಗುವಿನಲ್ಲೂ
ದುಃಖ ಮರೆತವರು
ಎಲ್ಲ ಗೆದ್ದರು.
2.
ಇತಿಹಾಸವೂ
ಭೂಗೋಲದೊಡಲಲ್ಲಿ
ಆರಂಭವಾಯ್ತು.
3.
ಕತ್ತಲೆಯಲ್ಲಿ
ಜೊತೆಗೂಡಿದವರು
ಬೆಳಕಾದರು.
-ಡಾ.ಖಾಡೆ
1.
ನಗುವಿನಲ್ಲೂ
ದುಃಖ ಮರೆತವರು
ಎಲ್ಲ ಗೆದ್ದರು.
2.
ಇತಿಹಾಸವೂ
ಭೂಗೋಲದೊಡಲಲ್ಲಿ
ಆರಂಭವಾಯ್ತು.
3.
ಕತ್ತಲೆಯಲ್ಲಿ
ಜೊತೆಗೂಡಿದವರು
ಬೆಳಕಾದರು.
-ಡಾ.ಖಾಡೆ
*
ಹಾಯ್ಕು..
